ಮನ ಸೆಳೆಯುತ್ತಿರುವ ಹಂಪಿ ಉತ್ಸವ ವಸ್ತುಪ್ರದರ್ಶನ
ಹಂಪಿ ಉತ್ಸವದ ಅಂಗವಾಗಿ ವಿರೂಪಾಕ್ಷ ದೇವಾಲಯ ಹಾಗೂ ಎದುರು ಗಣಪತಿ ದೇವಾಲಯದ ಬೀದಿಗೆ ಹೊಂದಿಕೊಂಡತೆ ಪಕ್ಕದಲ್ಲಿರುವ ಮಾತಂಗ ಪರ್ವತದ ಬಯಲಿನಲ್ಲಿ ಏರ್ಪಡಿಸಲಾಗಿರುವ ವಸ್ತು ಪ್ರದರ್ಶನ ಪ್ರವಾಸಿಗರು ಹಾಗೂ ಸಾರ್ವಜನಿಕರ ಮನ ಸೆಳೆಯುತ್ತಿವೆ.
ಶಿಲ್ಪಕಲೆ ಹಾಗೂ ಚಿತ್ರಕಲಾ ಶಿಬಿರ,ಮರಳು ಶಿಲ್ಪ ಪ್ರದರ್ಶನ, ಮತ್ಸ್ಯ ಮೇಳ, ಫಲಪುಷ್ಪ ಹಾಗೂ ವಸ್ತು ಪ್ರದರ್ಶನ ಮಳಿಗೆಗಳು ನೋಡುಗರನ್ನು ಹಂಪಿಯ ಐತಿಹಾಸಿಕ ಸ್ಮಾರಗಳ ಜೊತೆಗೆ ಪೈಪೋಟಿಗೆ ಬಿದ್ದಂದತೆ ಕೈ ಬಿಸಿ ಕರೆಯುತ್ತಿವೆ.