ಉತ್ಸವದಲ್ಲಿ ಬೈಕ್ ಸ್ಟಂಟ್ ಕ್ರೇಜ್, ಮೈ ಜುಮ್ ಎನ್ನುತ್ತೆ !
ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ನಡೆದ ಸಾಹಸ ಕ್ರೀಡೆಗಳಲ್ಲೊಂದಾದ ಬೈಕ್ ಸ್ಟಂಟ್ ಪ್ರದರ್ಶನವು ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿತು. ನೋಪಾಸನಾ ಅಡ್ವೆಂಚರ್ ಗೇಮ್ಸ್ ಇವರ ವತಿಯಿಂದ ಆಯೋಜಿಸಲಾದ ಬೈಕ್ ಸ್ಟಂಟ್ ಪ್ರದರ್ಶನವು ಸಾರ್ವಜನಿಕರು, ಯುವ ಸಮೂಹವನ್ನು ರಂಜಿಸಿತು.
ಜಿಲ್ಲಾಡಳಿತ ವತಿಯಿಂದ ಮೊದಲ ಬಾರಿಗೆ ನಡೆಸಲಾಗುತ್ತಿರುವ ಉತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳ ಜೊತೆಗೆ ಸಾಹಸ ಕ್ರೀಡೆಗಳನ್ನೂ ಆಯೋಜಿಸಿದೆ.
ಈ ಸಾಹಸ ಪ್ರದರ್ಶನಕ್ಕೆ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಚಾಲನೆ ನೀಡಿದರು.
ಬೈಕ್ ಸಾಹಸ ಪ್ರದರ್ಶನದಲ್ಲಿ ‘ಹಾಟ್ ಬೈ ಸ್ಟಂಟ್’ ತಂಡದವರಿಂದ ನಡೆಸಿದ್ದು, ಎರಡು ದ್ವಿಚಕ್ರ ವಾಹನ, ಎರಡು ಕ್ವಾಡ್ ಬೈಕ್‍ಗಳಿಂದ ನಡೆಸಿದ ವಿವಿಧ ರೀತಿಯ ಸ್ಟಂಟ್‍ಗಳಿಗೆ ಸಾರ್ವಜನಿಕರಿಗೆ ಮೆಚ್ಚುಗೆಗೆ ವ್ಯಕ್ತವಾಯಿತು.
ಪ್ರದರ್ಶನ ನಡೆಸಿದ ಭಟ್ಕಳ ಮೂಲದ ಬೈಕ್ ರೈಡರ್‍ಗಳಾದ ಮೊಹಮ್ಮದ್ ಗೌಸ್, ಅಖಿಲ್ ಮತ್ತು ಗೋವಾದ ಮೂಲದ ಸಮೀರ್ ತಮ್ಮ ವಿಭಿನ್ನ ರೀತಿಯ ಬೈಕ್ ಸ್ಟಂಟ್‍ಗಳು ಸುಮಾರು ಗಂಟೆಗೂ ಅಧಿಕ ಸಮಯ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಎಡಿಸಿ ಪಿ.ಎಸ್.ಮಂಜುನಾಥ ಸೇರಿದಂತೆ ಸಾರ್ವಜನಿಕರು ಹಾಗೂ ಯುವಕರು ಇದ್ದರು.